ಕಲಾಮಂಡಲಂ ಬಿಂದುಲೇಖಾ ಅವರು ಚಿತ್ರ ಕಲಾವಿದೆ ಮತ್ತು ಅವರು ಭಾರತದ ಕೇರಳ ರಾಜ್ಯದ ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯಗಾರ್ತಿ. ಕೇರಳ ರಾಜ್ಯದ ದೇವಾಲಯದ ರೇಖಾಚಿತ್ರದಲ್ಲಿ ಮೊದಲ ಮಹಿಳಾ ಮ್ಯೂರಲ್ ಪೇಂಟರ್ ಇವರಾಗಿದ್ದಾರೆ. == ಆರಂಭಿಕ ಜೀವನ ಮತ್ತು ಹಿನ್ನೆಲೆ == ಕಲಾಮಂಡಲಂ ಬಿಂದುಲೇಖಾ ಅವರು ಮೋಹಿನಿಯಾಟ್ಟಂ ಮತ್ತು ಭರತನಾಟ್ಯದಲ್ಲಿ ಡಿಪ್ಲೊಮಾ ಮತ್ತು ಕೇರಳ ಕಲಾಮಂಡಲಂನಿಂದ ಪದವಿ ಪಡೆದಿದ್ದಾರೆ. ಮಮ್ಮಿಯೂರ್ ಕೃಷ್ಣನ್ ಕುಟ್ಟಿ ನಾಯರ್ ಅವರ ಶಿಷ್ಯರಾದ ತನ್ನ ಸೋದರ ಮಾವ ಸದಾನಂದನ್ ಅವರ ಕೆಲಸದಿಂದ ಆಕರ್ಷಿತರಾದ ನಂತರ ಅವರು ಚಿತ್ರಗಳನ್ನು ಕೈಗೆತ್ತಿಕೊಂಡು ಆರು ವರ್ಷಗಳ ಕಾಲ ತರಬೇತಿ ಪಡೆದರು. == ಕಲಾ ವೃತ್ತಿ == ತ್ರಿಶ್ಶೂರ್‌ನ ತಿರೂರ್ ವಡಕುರುಂಬಕಾವು ದೇವಸ್ಥಾನದಲ್ಲಿ ಅವರ ಚೊಚ್ಚಲ ಕೆಲಸವು ಕೇರಳದ ದೇವಸ್ಥಾನದಲ್ಲಿ ಮಹಿಳಾ ಕಲಾವಿದರಿಂದ ಮಾಡಿದ ಮೊದಲ ಚಿತ್ರ ಎಂದು ಪರಿಗಣಿಸಲಾಗಿದೆ. ದೇವಿಯ ಮೂರು ರೂಪಗಳನ್ನು ಒಳಗೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಲು ಎರಡು ವರ್ಷಗಳನ್ನು ತೆಗೆದುಕೊಂಡಿತು. ಅವು ಸರಸ್ವತಿ (ಬಿಳಿ ಛಾಯೆಗಳಲ್ಲಿ), ಭದ್ರಕಾಳಿ (ಕಡು ನೀಲಿ ಬಣ್ಣದಲ್ಲಿ) ಮತ್ತು ಮಹಾಲಕ್ಷ್ಮಿ (ಕೆಂಪು ಛಾಯೆಗಳಲ್ಲಿ) ಚಿತ್ರಗಳಾಗಿವೆ. ಚಿತ್ರಕಲೆ "ರಜಸ್ ತಮಸ್ ಸತ್ವ" ಎಂಬ ವಿಷಯವನ್ನು ಆಧರಿಸಿದೆ. == ಉಲ್ಲೇಖಗಳು ==